ದೇಶಾದ್ಯಂತ ನಡೆದ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ತನ್ನ ಹಾಗೂ ತನ್ನ ಸಂಗಡಿಗರ ಪಾತ್ರದ ಕುರಿತು ಸ್ವಾಮೀ ಅಸೀಮಾನಂದ ತಪ್ಪೊಪ್ಪಿಗೆ ಹೇಳಿಕೆ ನೀಡುವ ಮೊದಲು, ಈ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿ ರಾಷ್ಟ್ರಮಟ್ಟದ ಮಾಧ್ಯಮಗಳೂ ಎಷ್ಟು ಬೇಜವಾಬ್ದಾರಿತನ ಹಾಗೂ ಪಕ್ಷಪಾತವಾಗಿ ವರದಿ ಮಾಡಿದ್ದವು ಎಂಬುದರ ಸಣ್ಣ ಝಲಕ್ ಇಲ್ಲಿದೆ.
ಹಾಗಾದರೆ ‘ಇಂಡಿಯಾ ಟುಡೇ’ಯಂತಹ ರಾಷ್ಟ್ರೀಯ ಮಟ್ಟದ ಪತ್ರಿಕೆಯೊಂದು ಈ ಮಂಪರು ಪರೀಕ್ಷೆಯ ಸಾಚಾತನವನ್ನು ಪರಾಂಬರಿಸದೆ, ಪೊಲೀಸರು ಹೇಳಿದ್ದನ್ನೇ ಯಾಕೆ ನಂಬಿತು? ಮಾತ್ರವಲ್ಲ ಅದನ್ನೊಂದು ದೊಡ್ಡ ಸುದ್ದಿಯಾಗಿ ಯಾಕೆ ಪ್ರಕಟಿಸಿತು?. ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟದ ಬಳಿಕ ಮೂಸಾರಾಂ ಭಾಗ್‌ನಂತಹ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಂದ ಯುವಕರನ್ನು ಠಾಣೆಗೆಳೆದುಕೊಂಡು ಹೋಗಲಾ ಯಿತು. ಪೊಲೀಸರ ಈ ಮತಿಗೇಡಿತನದ ಕೃತ್ಯಕ್ಕೆ ಸುದ್ದಿ ಮಾಧ್ಯಮಗಳು ಪ್ರಕಟಿಸಿದ ವರದಿಗಳೂ ಪರೋಕ್ಷ ಕಾರಣವಾಗಿದ್ದವು. (ಮಕ್ಕಾ ಸ್ಫೋಟದ ಹಿಂದೆ: ಆಂಧ್ರದ ರಾಜಧಾನಿಯಲ್ಲಿ ಕೋಮು ಹಿಂಸೆ, ಸಂಘಟಿತ ಅಪರಾಧ ಹಾಗೂ ಜಾಗತಿಕ ಜಿಹಾದ್‌ನ ಅಡ್ಡ ಪ್ರವೇಶ’’ ಎಂಬರ್ಥದ ಶಿರೋನಾಮೆಯ ಆಂಗ್ಲ ಲೇಖನವೊಂದು ಮೇ 23, 2007ರ ಫ್ರಂಟ್‌ಲೈನ್‌ನಲ್ಲಿ ಪ್ರಕಟವಾಗಿತ್ತು).
ಇಂತಹ ವರದಿಗಳಿಂದ ಪೊಲೀಸರ ದುಂಡಾವರ್ತನೆಗಳಿಗೆ ಸಮರ್ಥನೆ ದೊರೆತಂತಾಗುತ್ತದೆ. ಅಕ್ಟೋಬರ್ 11,2007ರಲ್ಲಿ ಕೇಂದ್ರ ಗೃಹ ಸಚಿವಾಲಯವು ಹೇಳಿಕೆ ನೀಡಿ, ಅಜ್ಮೀರ್ ಶರೀಫ್ ಸ್ಫೋಟದಲ್ಲಿ ಲಷ್ಕರೆ ತಯ್ಯೆಬಾದ ಕೈವಾಡವಿದೆಯೆಂದು ತಿಳಿಸಿತು.ಲಷ್ಕರ್ ಸಂಘಟನೆಯು ಸೂಫಿ ಪಂಥವನ್ನು ಕಡುವಾಗಿ ವಿರೋಧಿಸುತ್ತಿರುವುದರಿಂದ ಆ ಪಂಥದ ಪ್ರಧಾನ ಹೆಗ್ಗುರುತುಗಳಲ್ಲೊಂದಾಗಿರುವ ಅಜ್ಮೀರ್ ದರ್ಗಾ ಶರೀಫ್‌ನ ಮೇಲೆ ಅದು ಭಯೋತ್ಪಾದಕ ದಾಳಿಯನ್ನು ನಡೆಸಿದೆಯೆಂದು ಸಚಿವಾಲಯ ತಿಳಿಸಿತ್ತು.
ಮಾರನೆಯ ದಿನವೇ ಪ್ರವೀಣ್ ಸ್ವಾಮಿ ಎಂಬ ವರದಿಗಾರ ಬರೆದ ‘‘ಜನಪ್ರಿಯ ಇಸ್ಲಾಂ ವಿರುದ್ಧ ಸಮರ’’ ಎಂಬ ಲೇಖನವೊಂದನ್ನು ‘ದಿ ಹಿಂದೂ’ ಪತ್ರಿಕೆ ಪ್ರಕಟಿಸಿತು. ಅಜ್ಮೀರ್ ದರ್ಗಾ, ಮಕ್ಕಾ ಮಸೀದಿ ಹಾಗೂ ಮಾಲೆಗಾಂವ್‌ನ ಸೂಫಿ ಮಂದಿರದ ಮೇಲೆ ನಡೆದ ಸ್ಫೋಟಗಳು ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಜನಪ್ರಿಯವಾಗಿರುವ ಸೂಫಿ ಇಸ್ಲಾಂ ವಿರುದ್ಧ ಕರ್ಮಠ ಮುಸ್ಲಿಂ ತೀವ್ರವಾದಿಗಳು ನಡೆಸಿದ ಆಕ್ರಮಣವೆಂದು ಲೇಖನ ಪ್ರತಿಪಾದಿಸಿತ್ತು. ಆದರೆ ಈ ಎರಡೂ ಲೇಖನಗಳ ಪೊಳ್ಳುತನ ಈಗ ಬಯಲಾಗಿದೆ.ಇಲ್ಲಿ ನಿಜವಾಗಿಯೂ ನಡೆದಿರುವುದು ಭಾರತದ ಧಾರ್ಮಿಕ ಸಾಮರಸ್ಯದ ವಿರುದ್ಧ ಉಗ್ರ ಹಿಂದುತ್ವವಾದಿಗಳ ದಾಳಿಯಾಗಿದೆ. ಅಜ್ಮೀರ್ ಶರೀಫ್ ದರ್ಗಾಕ್ಕೆ ಹಿಂದೂಗಳು ಕೂಡಾ ಶ್ರದ್ಧಾಭಕ್ತಿಯಿಂದ ಭೇಟಿ ನೀಡುತ್ತಿರುವುದು ಕೇಸರಿ ಉಗ್ರರ ಹೊಟ್ಟೆಯುರಿಸಿದೆ. ‘‘ಅಜ್ಮೀರ್‌ನಲ್ಲಿ ಬಾಂಬ್ ಸ್ಫೋಟಿಸಿದಲ್ಲಿ ಅಲ್ಲಿಗೆ ಹಿಂದುಗಳು ಭೇಟಿ ನೀಡಲು ಹಿಂಜರಿಯುವರು ಎಂಬ ತರ್ಕ ನಮ್ಮದಾಗಿತ್ತು’’ ಎಂದು ಆಸೀಮಾನಂದ ಮ್ಯಾಜಿಸ್ಟ್ರೇಟರ ಮುಂದೆ ನೀಡಿದ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾನೆ.
ತೀರಾ ಇತ್ತೀಚೆಗೆ, ವಾರಣಾಸಿಯಲ್ಲಿ ನಡೆದ ಬಾಂಬ್ ಸ್ಫೋಟದ ಸಂದರ್ಭದಲ್ಲೂ ಮಾಧ್ಯಮಗಳು ಪುಂಖಾನುಪುಂಖ ಲೇಖನ ಮಾಲೆಗಳನ್ನು ಹರಿಸಿದವು. ಬೇಹುಗಾರಿಕಾ ಸಂಸ್ಥೆಗಳ ಮಾಹಿತಿಯನ್ನಾಧರಿಸಿದ ಈ ಲೇಖನಗಳಲ್ಲಿ ಸ್ಫೋಟ ನಡೆಸಿದ ಇಂಡಿಯನ್ ಮುಜಾಹಿದೀನ್ ಉಗ್ರರು, ದೇಶದಿಂದ ಪರಾರಿಯಾಗಿದ್ದು ವಿದೇಶಗಳಲ್ಲಿ ತಲೆಮರಿಸಿಕೊಂಡಿದ್ದಾರೆ. ಆದರೆ ಅವರ ಸಹಚರರು ಆಝಂಘರ್ ಹಾಗೂ ಭಟ್ಕಳ ಮತ್ತಿತರ ನಗರಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆಂದು ಈ ಮಾಧ್ಯಮಗಳು ಸುಳಿವು ಕೂಡಾ ನೀಡಿದ್ದವು!.
-ಮನೀಷಾ ಸೇಠಿ
-ಮನೀಷಾ ಸೇಠಿ
No comments:
Post a Comment